Posts

Showing posts from October, 2018

ಮಾತೃ ಋಣ

ಋಣ ಋಣ ಋಣವಿದು ಮಾತೃ ಋಣ ಕಣ ಕಣದಲಿ ತುಂಬಿದೆ ಈಋಣ ಮಣಿದರು ತೀರದೀ ತಾಯಿಋಣ ತಣಿಸದಿರು ತಾಯಿಯ ನೀ ದಿನ ಅವಿರತ ಸಲಹಿ ಕಾಳಜಿ ಮಾಡುವ ಆವರ ಕಾಣೆ ತಾಯಂತೆ. ನವಮಾಸದ ಗರ್ಭವಾಸದ ಋಣವ ತವಕದಿ ತೀರಿಸ ಲಾದೀತೆ? ವಾತ್...

ತಂದೆ

ತೀರ್ಥರೂಪು ತಂದೆಯ ನೆನೆವೆನು ಸಾರ್ಥಕ ಜೀವನ ನಡೆಸಿದನು ಅರ್ಥದ ಸಂಪಾದನೆಯ ಜೊತೆಗೆ ಕರ್ತವ್ಯ ಪಾಲಿಸಿದ ಪಿತೃವನ್ನು ತಮ್ಮ ಮನದ ಪ್ರೀತಿಸಾಗರವ ಒಮ್ಮೆಯಾದರೂ ತೋರ ದಿರುವ ಸುಮ್ಮನಿದ್ದೆ ಶಿಸ್ತನು ಕಲಿ...

ಅಮ್ಮ

ಅಮ್ಮ ಅಮ್ಮ ಪ್ರೀತಿಯ ಅಮ್ಮ ಸಮರಾರೂ ನಿನಗಿಲ್ಲಮ್ಮ ಅಮಿತ ಸುಖ ನಿನ್ನ ಮಡಿಲಲ್ಲಮ್ಮ ನಮಿಸುವೆ ನಿನ್ನಯ‌ ಅಡಿಗಳಿಗಮ್ಮ ಬಾಲ್ಯದ ತುಂಟರ ಚೇಷ್ಟೆಯ ಸಹಿಸಿ ಸಲಹಿದೆ ವಾತ್ಸಲ್ಯದಿ ತಿದ್ದಿ ಸಲಹೆ ನೀಡುತ ಶಿಕ...

ತಾಯಿ

ತಾಯ ಪ್ರೀತಿಗಳತೆಯಿಲ್ಲ ತಾಯಿ ಮಮತಾ ಮೂರುತಿ ತಾಯಿ ಬೆಲೆಯ ಅರಿತು ಬಾಳು ತಾಯಿ ಆಶೀರ್ವಾದದಿ ಕಾಯುವಳು ಮಗುವಿಗಾಗಿ ಕಾಯ ಶಕ್ತಿಯಿಂದಲಿ ಕಾಯಕದಲ್ಲಿ ಮಗುವ ನೆನಪು ಕಾಯುವುದೇ ಕೆಲಸವು ತಾಳುವುದು  ರೂಢ...

ತಾಯಂದಿರ ಮಡಿಲಲ್ಲಿ

Image
ನನ್ನ ಬಾಳಿನ ಅಮೂಲ್ಯ ತಾಯಂದಿರು ನನ್ನ ಪ್ರೀತಿಸಿ ಸಲಹುವರು ತನುವ ದಂಡಿಸಿ ಪೊರೆದಿಹರು ಅನುದಿನ ಸರಿದಾರಿ ತೋರುವರು ಬಾಲ್ಯದಲಿ ಯೌವನದಲ್ಲಿ ಸುಲಲಿತ ಅಮ್ಮನ ಮಡಿಲಲ್ಲಿ ಕಲೆ, ವಿದ್ಯೆ, ನಡತೆ ಕಲಿತಲ್ಲಿ ಅಲೆಯಂತೆ ಸೇರಿ ಅತ್ಯಮ್ಮನಲ್ಲಿ ಅತ್ತೆಯ ಪ್ರೀತಿಯಲ್ಲಿ ಬೆಳೆದು ನಿತ್ಯ ಶಿಸ್ತು ಸಂಯಮವ ತಳೆದು ಅತಿ ಮುದ್ದಾದ ಮಕ್ಕಳ ಪಡೆದು ಸತಿ, ತಾಯಿ, ಸೊಸೆಯಾಗಿ ಮೆರೆದು ಇಬ್ಬರು ತಿದ್ದಿ ತೀಡಿದರು ನನ್ಞ ಕೊಬ್ಬದೆ ಕೊರಗದೆ ಬಾಳುವುದನ್ನ ಉಬ್ಬದೆ ಕುಗ್ಗದೆ ಸಹಿಸುವುದನ್ನ ಅಬ್ಬರ ಮಾಡಿದೆ ಬಾಳುವುದನ್ನ ದೇವರಲಿ ನಿಜ ಭಕ್ತಿಯ ಬಿತ್ತಿ ಅವರೇ ಸಾಧನೆ ಮಾರ್ಗವ ಕೆತ್ತಿ ನವ ಸಂತೋಷದಿ ಬಾಳುವ ರೀತಿ ಅವರಿಂದಲೇ ಕಲಿತಿಹೆ ನೀತಿ ಧನ್ಯನಾದೆ ತಾಯಂದಿರ ಜೊತೆಯಲಿ ಅನ್ಯ ಭಾಗ್ಯವೇನಿಹುದು ಇಳೆಯಲಿ ಮಾನ್ಯರಿವರು ಎಂದೆಂದೂ ಭುವಿಯಲಿ ಅ ನನ್ಯ ಹರಿಗೆ ವಂದಿಪೆನು ಭಕ್ತಿಯಲಿ ಶ್ರೀ ಕೃಷ್ಣಾರ್ಪಣಮಸ್ತು ರೂಪಶ್ರೀ ಶಶಿಕಾಂತ್