ತಾಯಂದಿರ ಮಡಿಲಲ್ಲಿ



ನನ್ನ ಬಾಳಿನ ಅಮೂಲ್ಯ ತಾಯಂದಿರು
ನನ್ನ ಪ್ರೀತಿಸಿ ಸಲಹುವರು
ತನುವ ದಂಡಿಸಿ ಪೊರೆದಿಹರು
ಅನುದಿನ ಸರಿದಾರಿ ತೋರುವರು
ಬಾಲ್ಯದಲಿ ಯೌವನದಲ್ಲಿ
ಸುಲಲಿತ ಅಮ್ಮನ ಮಡಿಲಲ್ಲಿ
ಕಲೆ, ವಿದ್ಯೆ, ನಡತೆ ಕಲಿತಲ್ಲಿ
ಅಲೆಯಂತೆ ಸೇರಿ ಅತ್ಯಮ್ಮನಲ್ಲಿ
ಅತ್ತೆಯ ಪ್ರೀತಿಯಲ್ಲಿ ಬೆಳೆದು
ನಿತ್ಯ ಶಿಸ್ತು ಸಂಯಮವ ತಳೆದು
ಅತಿ ಮುದ್ದಾದ ಮಕ್ಕಳ ಪಡೆದು
ಸತಿ, ತಾಯಿ, ಸೊಸೆಯಾಗಿ ಮೆರೆದು
ಇಬ್ಬರು ತಿದ್ದಿ ತೀಡಿದರು ನನ್ಞ
ಕೊಬ್ಬದೆ ಕೊರಗದೆ ಬಾಳುವುದನ್ನ
ಉಬ್ಬದೆ ಕುಗ್ಗದೆ ಸಹಿಸುವುದನ್ನ
ಅಬ್ಬರ ಮಾಡಿದೆ ಬಾಳುವುದನ್ನ
ದೇವರಲಿ ನಿಜ ಭಕ್ತಿಯ ಬಿತ್ತಿ
ಅವರೇ ಸಾಧನೆ ಮಾರ್ಗವ ಕೆತ್ತಿ
ನವ ಸಂತೋಷದಿ ಬಾಳುವ ರೀತಿ
ಅವರಿಂದಲೇ ಕಲಿತಿಹೆ ನೀತಿ
ಧನ್ಯನಾದೆ ತಾಯಂದಿರ ಜೊತೆಯಲಿ
ಅನ್ಯ ಭಾಗ್ಯವೇನಿಹುದು ಇಳೆಯಲಿ
ಮಾನ್ಯರಿವರು ಎಂದೆಂದೂ ಭುವಿಯಲಿ ಅ
ನನ್ಯ ಹರಿಗೆ ವಂದಿಪೆನು ಭಕ್ತಿಯಲಿ
ಶ್ರೀ ಕೃಷ್ಣಾರ್ಪಣಮಸ್ತು
ರೂಪಶ್ರೀ ಶಶಿಕಾಂತ್

Comments